ಧ್ರುವ ಸರ್ಜಾ ಹೊಸ ಹೇರ್ ಸ್ಟೈಲ್ ಗೆ ಹೆಣ್ಣುಮಕ್ಕಳು ಫಿದಾ | DhruvaSarja New Look

2021-03-08 1

ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಪೊಗರು ಸಿನಿಮಾದ ಸಕ್ಸಸ್ ನ ಸಂಭ್ರಮದಲ್ಲಿದ್ದಾರೆ. ಇತ್ತೀಚಿಗಷ್ಟೆ ಪೊಗರು ಸಿನಿಮಾ ರಿಲೀಸ್ ಆಗಿದ್ದು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು ಮೂರ್ನಾಲ್ಕು ವರ್ಷಗಳಿಂದ ಪೊಗರು ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಧ್ರುವ ಉದ್ದ ಕೂದಲು ಮತ್ತು ಗಡ್ಡ ಬಿಟ್ಟ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಚಿತ್ರೀಕರಣ ಮುಗಿಯುತ್ತಿದ್ದಂತೆ ಧ್ರುವ ಕೂದಲಿಗೆ ಕತ್ತರಿ ಹಾಕುವ ಮೂಲಕ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಧ್ರುವ ಮತ್ತೆ ಲುಕ್ ಬದಲಾಯಿಸಿಕೊಂಡು ಮತ್ತಷ್ಟು ಹ್ಯಾಂಡ್ ಸಮ್ ಆಗಿ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ.

Action Prince Dhruva Sarja new hairstyle look viral on social media